ಪತ್ರಿಕಾ ಪ್ರಕಟಣೆಗಳು

ಜನತಾ ಪ್ರಣಾಳಿಕೆ


 

ಇದು ಜನತಾ ಪ್ರಣಾಳಿಕೆಯ ಕರಡು. ಓದಿ, ನಿಮಗೇನಾದರೂ ಸೇರಿಸಬೇಕನ್ನಿಸದರೆ ಅದನ್ನು ಪ್ರತಿಕ್ರಿಯೆಯಾಗಿ ದಾಖಲಿಸಿ.

1. ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು; ನಮ್ಮ ಎಲ್ಲ ರಾಜಕೀಯ ಪಕ್ಷಗಳನ್ನು ಈ ಗಣಿಗಾರಿಕೆ ಭ್ರಷ್ಟಗೊಳಿಸಿದೆ.

2. ಎಲ್ಲ ಮಕ್ಕಳಿಗೂ ಹತ್ತನೆಯ ಇಯತ್ತೆಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳು (Common school) ಗಳಲ್ಲಿ ಶಿಕ್ಷಣ ದೊರೆಯಬೇಕು. ಮಕ್ಕಳಲ್ಲಿ ಬೇಧವೆಣಿಸಬಾರದು.

3. ನಮ್ಮ ನಗರಗಳು ಬೆಳೆಯುವಾಗ ವೃದ­ರಿಗೂ, ಮಕ್ಕಳಿಗೂ, ಅಂಗವಿಕಲರಿಗೂ ಈ ನಗರಗಳಲ್ಲಿ ಬದುಕುವುದು ಆಹ್ಲಾದಕರವಾಗಿರುವಂತೆ ಬೆಳೆಸಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನಗಳು, ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶಗಳು, ಸೈಕಲ್‌ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಇರಬೇಕು.

4. ಬಡಪಾಯಿಗಳಾದರೂ ಆತ್ಮಗೌರವ ಕಳೆದುಕೊಳ್ಳದ ಅಲ್ಪಸಂಖ್ಯಾತ ಜನಸಮುದಾಯದವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಬೇಕು; ಅವರಿಗೆ ಮೀಸಲಾತಿ ಇರಬೇಕು.

5. ಈಗಾಗಲೇ ಮೀಸಲಾತಿಯ ಸೌಲಭ್ಯ ಪಡೆದವರ ಮಕ್ಕಳಿಗೆ ಮೀಸಲಾತಿ ಬೇಕಾಗಿಲ್ಲ; ಬದಲಾಗಿ ಆ ವರ್ಗಗಳ ಸಮುದಾಯದಲ್ಲಿ ಈ ವರೆಗೆ ಏನೂ ಸಿಗದವರಿಗೆ ಈ ಮೀಸಲಾತಿಯನ್ನು ನೀಡಬೇಕು

6. ವೋಟುಗಳನ್ನು ಗಿಟ್ಟಿಸಿಕೊಳ್ಳಲು ಕೋಮು, ಜಾತಿ ಮತ್ತು ಭಾಷೆಗಳ ನಡುವೆ ವೈಷಮ್ಯವನ್ನು ಉದ್ದೇಶಪೂರ್ವಕವಾಗಿ ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಭಂಧಗಳಿರಬೇಕು.

7. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ವಿಶೇಷ ಆರ್ಥಿಕ ವಲಯ (ಎಸ್‌ಇಜಡ್‌)ಗಳಿಗಾಗಿ ರೈತರಿಂದ ಪಡೆದುಕೊಳ್ಳವುದನ್ನು ನಿಲ್ಲಿಸಬೇಕು.

8. ರೈತರಿಗೆ ತಾವು ಬೆಳೆದದ್ದನ್ನು ಮಾರುವಾಗ ಅವರು ಬೆಳೆದುದಕ್ಕೆ ಯೋಗ್ಯವಾದ ಬೆಲೆ ಸಿಗುವಂತಾಗಬೇಕು.

9. ದೊಡ್ಡ ದೊಡ್ಡ ಮಾಲು (malls)ಗಳ ಬದಲು ಹಲವು ವ್ಯಾಪಾರಿಗಳು ನಡೆಸುವ ಸಣ್ಣ ಪುಟ್ಟ ದೊಡ್ಡ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು

10. ಈ ಭೂಮಂಡಲದ ಶಾಖವನ್ನು ಹೆಚ್ಚುಸುತ್ತ ಎಲ್ಲ ಜೀವಿಗಳಿಗೂ ಮೃತ್ಯುಪ್ರಾಯವಾದ ಅಮೆರಿಕನ್‌ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲೂ ವ್ಯಕ್ತವಾಗಬೇಕು.

11. ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯತ್ತಿಗೂ, ಜಲ ಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನದ ಲೋಕದಲ್ಲಿ ಆದ್ಯತೆ ಇರುವಂತೆ ನೋಡಿಕೊಳ್ಳಬೇಕು  read more »

ಋಜುವಾತು ಬಿಡುಗಡೆ

ಕನ್ನಡ ಚಿತ್ರರಂಗದ ಮೊದಲ ಕ್ರಾಂತಿ ಪುರುಷ*

ಪಟ್ಟಾಭಿ ವಿಲಕ್ಷಣ ಪ್ರತಿಭೆಯ ಕಲಾವಿದ. ಅವರು ಕಲಿತದ್ದು ಟ್ಯಾಗೋರರ ಶಾಂತಿನಿಕೇತನದಲ್ಲಿ. ಟ್ಯಾಗೋರರ ಕಾವ್ಯದಿಂದ ಅವರು ಪ್ರಭಾವಿತರಾಗಿದ್ದರು. ಹಾಗೆಯೇ ತಮ್ಮ ಕಾಲದ ಇತರ ಎಲ್ಲಾ ಲೇಖಕರಿಗಿಂತ ಮೊದಲು ಆ ಪ್ರಭಾವದಿಂದ ಪಾರಾದವರೂ ಪಟ್ಟಾಭಿಯೇ.

ಅವರ `ಪಿಟೀಲ್‌ ಡಝನ್‌' ಕಾವ್ಯ ಸಂಗ್ರಹದ ಕವನಗಳ ತೀವ್ರವಾದ ನವ್ಯತೆ ಕನ್ನಡದಲ್ಲಿ ಕಾಣಿಸಿಕೊಂಡದ್ದು ಪಟ್ಟಾಭಿ ತೆಲುಗಿನಲ್ಲಿ ಬರೆದಾದ ಎರಡು ಮೂರು ದಶಕಗಳ ನಂತರ. ತೆಲುಗು ಕಾವ್ಯದ ಇತಿಹಾಸವನ್ನೇ ಅವರು ಬದಲು ಮಾಡಿದರು. ಪಟ್ಟಾಭಿಯಂಥ ಕ್ರಾಂತಿಕಾರಿಯಾದ ಮನಸ್ಸಿಗೆ ಅದೆಷ್ಟು ಹಿಂದೆ ತೆಲುಗಿನಂಥಾ ನಾದಮಯ ಭಾವಾತಿಕರೇಕದ ಭಾಷೆ ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಆಶ್ಚರ್ಯವಾಗುತ್ತದೆ.  read more »

Syndicate content